Posts

ಭದ್ರಾವತಿ ಆಕಾಶವಾಣಿ ವಜ್ರ ಮಹೋತ್ಸವ ಸಂಭ್ರಮ

Image
ವಿಜಯ ಸಂಘರ್ಷ ಭದ್ರಾವತಿ: ಆಕಾಶವಾಣಿ ಭದ್ರಾವತಿ ಕೇಂದ್ರದ ವಜ್ರ ಮಹೋತ್ಸವ ವರ್ಷ ಆರಂಭದ ಹಿನ್ನೆಲೆ ಯಲ್ಲಿ ಕೇಂದ್ರದ ಆವರಣದಲ್ಲಿ ಕೇಳುಗ ರೊಂದಿಗೆ ಆಯೋಜಿಸಿದ್ದ ಸಂಭ್ರಮ ಆಚರಣೆ ಕಾರ್ಯಕ್ರಮದ ಮುನ್ನುಡಿ ಯಶಸ್ವಿಯಾಗಿ ಜರುಗಿತು. ಭದ್ರಾವತಿ ಆಕಾಶವಾಣಿ ಕೇಂದ್ರವು 60ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್.ವೆಂಕಟೇಶ್ ಅವರು ವಿಶ್ವಜ್ಞಾನಿ ಅಂಬೇಡ್ಕರ್ ಕುರಿತು ಪ್ರಸಾರವಾದ ಸರಣಿಯ ಪ್ರಶ್ನೆಗೆ ಸರಿ ಉತ್ತರ ನೀಡಿದ 45 ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಪ್ರೊ. ಎಸ್.ವೆಂಕಟೇಶ ಏ: 14 ರಿಂದ ವರ್ಷಪೂರ್ತಿ ಅಂಬೇಡ್ಕರ್ ವಿಚಾರಧಾರೆಯನ್ನು ಆಕಾಶವಾಣಿ ಸಹಯೋಗದಲ್ಲಿ ಪ್ರಸಾರ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್.ಭಟ್ ವಜ್ರ ಮಹೋತ್ಸವದ ಪ್ರಯುಕ್ತ ಮಹಿಳೆಯರಿಗೆ ಅಡುಗೆ ಕಾರ್ಯಕ್ರಮ, ಮಕ್ಕಳಿಗೆ ಪಂಚತಂತ್ರ ಕಥೆ, ಶಿವಮೊಗ್ಗ ಪ್ರವಾಸಿತಾಣ ಪರಿಚಯ, ಸಿನಿಪ್ರಿಯರಿಗೆ ಚಿತ್ರಲಹರಿ, ಯುವಕರಿಗೆ ವೃತ್ತಿ ಮಾರ್ಗದರ್ಶನವನ್ನು ಒಳಗೊಂಡ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗು ವುದು ಎಂದು ತಿಳಿಸಿದರು. ಕೇಳುಗರ ಪರವಾಗಿ. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಉಮೇಶ್ ದಾವಣಗೆರೆ, ಅಥಣಿಯಿಂದ ಶ್ರೀಶೈಲ ತೇಲಿ, ಕಲ್ಬುರ್ಗಿ ಮಹೇಶ್ ಹಿಪ್ಪರಿಗಿ, ನ್ಯಾಮತಿ ಹಂಪಣ್ಣ. ಹಾಗೂ ಆಕಾಶವ...

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಚೆ ಸೇವಕರ ಸಂಘದಿಂದ ಪ್ರತಿಭಟನೆ

Image
ಜೀವಜಲ ಸುದ್ದಿಜಾಲ ಭದ್ರಾವತಿ: ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಬುಧವಾರ ನಗರದ ಪ್ರಧಾನ ಅಂಚೆ ಕಚೇರಿ ಮುಂಭಾಗ ಒಂದು ಸಾಂಕೇತಿಕವಾಗಿ ಮುಷ್ಕರ ನಡೆಸಲಾಯಿತು. ವಲಯ ರಾಜ್ಯಾಧ್ಯಕ್ಷ ಎಚ್.ವಿ ರಾಜ್ ಕುಮಾರ್ ಮಾತನಾಡಿ, ಈಗಾಗಲೇ 7ನೇ ವೇತನ ಆಯೋಗದ ಕಮಲೇಶ್ ಚಂದ್ರ ವರದಿ ಪ್ರಕಾರ ಅಂಚೆ ನೌಕರರಿಗೆ ಹಲವಾರು ಶಿಫಾರಸ್ಸುಗಳನ್ನು ಮಾಡಲಾಗಿದೆ. ಆದರೆ ಶಿಫಾರಸ್ಸುಗಳನ್ನು ಇಲಾಖೆ ಅಥವಾ ಸರ್ಕಾರ ಇದುವರೆಗೂ ಯಥಾವತ್ತಾಗಿ ಅನುಮೋದನೆ ಮಾಡಿಲ್ಲ. ಇದರಿಂದಾಗಿ ನೌಕರರು ಸಮಸ್ಯೆ ಎದುರಿಸುವಂತಾಗಿರುವುದರಿಂದ ಹೋರಾಟ ಅನಿವಾರ್ಯವಾಗಿದೆ ಎಂದರು. 8 ಗಂಟೆಗಳ ಕೆಲಸ ನೀಡುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ 12-14-36 ಸೇವೆ ಸಲ್ಲಿಸಿದ ಜಿಎಸ್ ಡಿ ನೌಕರರಿಗೆ ವಿಶೇಷ ಇನ್ ಕ್ರೀಮೆಂಟ್ ನೀಡಬೇಕು. ಗ್ರೂಪ್ ಇನ್ಸೂರೆನ್ಸ್ ಕವರೇಜ್ ರು.5 ಲಕ್ಷದವರೆಗೆ ಹೆಚ್ಚಿಸಬೇಕು. ಅವೈಜ್ಞಾನಿಕ ಗುರಿ ಸಾಧಿಸದಿರುವ ಜಿಡಿಎಸ್ ನೌಕರರಿಗೆ ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸಬೇಕು. ಜಿಡಿಎಸ್ ಗ್ರಾಚ್ಯುಟಿ ಹಣ ರು. 5 ಲಕ್ಷಗಳವರೆಗೆ ಹೆಚ್ಚಿಸಬೇಕು. 180 ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಹಾಗು ಜಿಡಿಎಸ್ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.     ಹಲವಾರು ಬಾರಿ ಹ...

ಯುವ ಸಮೂಹವನ್ನು ಅಪಾಯದಿಂದ ಪಾರು ಮಾಡಬೇಕಿದೆ

Image
ವಿಜಯ ಸಂಘರ್ಷ ಭದ್ರಾವತಿ : ಈ ಹಿಂದೆ ಗಂಧದ ನಾಡಾಗಿದ್ದ ಮಲೆನಾಡು ಈಗ ಗಾಂಜಾ ನಾಡಾಗಿ ಬದಲಾಗುತ್ತಿದೆ. ಯುವಸಮೂಹವನ್ನು ಅಪಾಯದಿಂದ ಪಾರು ಮಾಡಬೇಕಿದೆ ಎಂದು ಪ್ರಕೃತಿ ವಿಕೋಪ ಅಧ್ಯಯನ ತಜ್ಞ ಡಾ. ವಿ.ಎಲ್.ಎಸ್. ಕುಮಾರ್ ಆತಂಕ ವ್ಯಕ್ತಪಡಿಸಿದರು. ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ದಿ. ಚನ್ನಬಸಪ್ಪ ಕಡೂರಳ್ಳಿ ದತ್ತಿ ಉಪನ್ಯಾಸ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ವಾತಾವರಣದಲ್ಲಿ ನಿತ್ಯದ ಬದಲಾವಣೆ ಗಮನಿಸಿದರೆ ಮುಂದಿನ 50 ವರ್ಷಗಳಲ್ಲಿ ಭೂಮಿ ಮೇಲೆ ಮನುಷ್ಯ ವಾಸಿಸಲು ಕಷ್ಟ ವಾಗಲಿದೆ‌. ಒಂದು ಮರ ನಾಲ್ಕು ಜನರಿಗೆ ಆಮ್ಲ ಜನಕ ಒದಗಿಸುತ್ತದೆ. ಗಾಳಿ, ಬೆಳಕು, ನೀರು, ಆಹಾರ, ಸಸ್ಯ ಎಲ್ಲವನ್ನೂ ಒಳಗೊಂಡ ಪರಿಸರವೇ ದೇವರು. ಅದು ನಮಗೆ ಬದುಕಲು ಎಲ್ಲಾ ಕೊಡುತ್ತದೆ. ಅದನ್ನು ಸಂರಕ್ಷಿಸಲು ನಾವೇನು ನೀಡುತ್ತಿದ್ದೇವೆ ಎಂದು ಪ್ರಶ್ನಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ಜ್ಯೋತಿ ಬೆಳಗಿಸಿ ಉದ್ಘಾ ಟಿಸಿದರು. ಪ್ರಿನ್ಸಿಪಾಲ್ ಪ್ರೊ. ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಭದ್ರಾವತಿ ತಾಲೂಕು ಕಸಾಪ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಹೊಳೆಹೊನ್ನೂರು ಹೋಬಳಿ ಕಸಾಪ ಅಧ್ಯಕ್ಷ ಸಿದ್ದಪ್ಪ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ದೇವಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ರುದ್ರಮುನಿ ನಿರ...

ಕಾಂಗ್ರೆಸ್ ಪಕ್ಷ ಘೋಷಿಸಿರುವ ಯೋಜನೆ ಗಳ ಕುರಿತು ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ: ಬಿ.ಕೆ.ಮೋಹನ್

Image
ವಿಜಯ ಸಂಘರ್ಷ ಭದ್ರಾವತಿ: ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್‌ನಲ್ಲಿ ಘೋಷಿಸಿರುವ ಯೋಜನೆ ಗಳ ಕುರಿತು ಟೀಕೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ, ಸಿಎಂ ಸಿದ್ದ ರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ನಗರಸಭೆ ಸದಸ್ಯ ಬಿ.ಕೆ ಮೋಹನ್ ಹೇಳಿದರು. ಅವರು ಭಾನುವಾರ ನಗರದಕೆಎಸ್‌ಆರ್‌ ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ರಾಜ್ಯಾದ್ಯಂತ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಶಕ್ತಿ ಯೋಜನೆ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಜೂ.11 ಮಹಿಳೆಯರು ಸಂಭ್ರಮಿಸುವ ದಿನವಾಗಿದೆ. ಸಿಎಂ ಸಿದ್ದರಾಮಯ್ಯ ನವರು ಆಡಳಿತದಲ್ಲಿ ಹೆಚ್ಚಿನ ಅನುಭವ ಹೊಂದಿ ದ್ದಾರೆ. ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ನುಡಿ ದಂತೆ ನಡೆಯಲಾಗುತ್ತಿದೆ. ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸದಸ್ಯರಾದ ಚನ್ನಪ್ಪ, ಗೀತಾ ರಾಜ್‌ಕುಮಾರ್, ಲತಾ ಚಂದ್ರಶೇಖರ್, ಶೃತಿ ವಸಂತ್, ಮಹಮದ್ ಯೂಸಫ್, ಉಪತಹಸೀಲ್ದಾರ್ ಮಂಜನಾಯ್ಕ, ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ರಂಗನಾಥ್ ಅಂತರಗಟ್ಟಿ,ಕಾಂಗ್ರೆಸ್ ಮುಖಂಡರಾದ ಎಚ್.ಎಲ್ ಷಡಾಕ್ಷರಿ, ಬಿ.ಕೆ ಜಗನ್ನಾಥ್, ಎಸ್. ಮಣಿಶೇಖರ್...

ಜೂ.10ರಂದು ಶಕ್ತಿ ಯೋಜನೆ ಉದ್ಘಾಟನೆ

ಭದ್ರಾವತಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಿವಮೊಗ್ಗ ವಿಭಾಗದ ಭದ್ರಾವತಿ ಘಟಕದಲ್ಲಿ ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ರಾಜ್ಯಾದ್ಯಂತ ಮಹಿಳೆ ಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗು ವೇಗದೂತ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಶಕ್ತಿ ಯೋಜನೆ ಉದ್ಘಾಟನೆ ಜೂ.11ರಂದು ಮಧ್ಯಾಹ್ನ 12.30ಕ್ಕೆ ನಗರದ ಮುಖ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ನಡೆಯಲಿದೆ. ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಲಿದ್ದು, ಉಪವಿಭಾಗಾ ಧಿಕಾರಿ ರವಿಚಂದ್ರನಾಯಕ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ತಹಸೀಲ್ದಾರ್ ಸುರೇಶ್ ಆಚಾರ್, ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ನಗರಸಭೆ ಪೌರಾಯುಕ್ತ ಮನುಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿ ಸುವಂತೆ ಘಟಕ ವ್ಯವಸ್ಥಾಪಕಿ ಅಂಬಿಕಾ ಸುಧೀರ್ ಕೋರಿದ್ದಾರೆ.
*ನಮ್ಮ ಸಿಹಿಮೊಗ್ಗೆ ಸೇಫ್ ಆದರೂ ಹುಷಾರ್* ಶಿವಮೊಗ್ಗ :ಕರಾಳ ಕೊರೊನಾ  ಪರೀಕ್ಷೆಯ ತಪಾಸಣೆಯಲ್ಲಿ ಇಂದು ಸಂಜೆ ದೊರೆತ ಕೊರೊನಾ ಪರೀಕ್ಷಾ   ಫಲಿತಾಂಶ ಇದು. ಒಟ್ಟು 2096 ಜನರ  ತಪಾಸಣೆಯಾಗಿದ್ದು 1976 ಜನರ ವರದಿ ನೆಗಿಟೀವ್ ಬಂದಿದೆ. ತಪಾಸಣೆ ಬಿರುಸಿನಿಂದ ನಡೆಯುತ್ತಿದ್ದು  ಇಂದು 125ಕ್ಕೂ ಹೆಚ್ಚು ಜನರ ವರದಿ ನೆಗಿಟೀವ್ ಬಂದಿದೆ. https://pwnz.co/nMjYRHINg6
ಬೆಂಗಳೂರು: ಮಾಜಿ ಸಂಸದ ಧೃವನಾರಾಯಣ್ ಅವರು ಚಾಮರಾಜನಗರ ಜಿಲ್ಲೆ ಕಾಂಗ್ರೆಸ್ ಪರವಾಗಿ ಕಾಂಗ್ರೆಸ್ ಕೊರೊನಾ ಪರಿಹಾರ ನಿಧಿಗೆ 10 ಲಕ್ಷ ರುಪಾಯಿ ಚೆಕ್ ಅನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಗಳೂರಿನಲ್ಲಿ ಬುಧವಾರ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ಪುಟ್ಟರಂಗಶೆಟ್ಟಿ, ಆರ್. ನರೇಂದ್ರ, ಮಾಜಿ ಸಂಸದ ಶಿವಣ್ಣ, ಮಾಜಿ ಶಾಸಕ ಕೆ. ಬಾಲರಾಜ್, ಜಿಲ್ಲಾಧ್ಯಕ್ಷ ಮರಿಸ್ವಾಮಿ ಇದ್ದರು.