ಯುವ ಸಮೂಹವನ್ನು ಅಪಾಯದಿಂದ ಪಾರು ಮಾಡಬೇಕಿದೆ
ವಿಜಯ ಸಂಘರ್ಷ ಭದ್ರಾವತಿ : ಈ ಹಿಂದೆ ಗಂಧದ ನಾಡಾಗಿದ್ದ ಮಲೆನಾಡು ಈಗ ಗಾಂಜಾ ನಾಡಾಗಿ ಬದಲಾಗುತ್ತಿದೆ. ಯುವಸಮೂಹವನ್ನು ಅಪಾಯದಿಂದ ಪಾರು ಮಾಡಬೇಕಿದೆ ಎಂದು ಪ್ರಕೃತಿ ವಿಕೋಪ ಅಧ್ಯಯನ ತಜ್ಞ ಡಾ. ವಿ.ಎಲ್.ಎಸ್. ಕುಮಾರ್ ಆತಂಕ ವ್ಯಕ್ತಪಡಿಸಿದರು. ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ದಿ. ಚನ್ನಬಸಪ್ಪ ಕಡೂರಳ್ಳಿ ದತ್ತಿ ಉಪನ್ಯಾಸ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ವಾತಾವರಣದಲ್ಲಿ ನಿತ್ಯದ ಬದಲಾವಣೆ ಗಮನಿಸಿದರೆ ಮುಂದಿನ 50 ವರ್ಷಗಳಲ್ಲಿ ಭೂಮಿ ಮೇಲೆ ಮನುಷ್ಯ ವಾಸಿಸಲು ಕಷ್ಟ ವಾಗಲಿದೆ. ಒಂದು ಮರ ನಾಲ್ಕು ಜನರಿಗೆ ಆಮ್ಲ ಜನಕ ಒದಗಿಸುತ್ತದೆ. ಗಾಳಿ, ಬೆಳಕು, ನೀರು, ಆಹಾರ, ಸಸ್ಯ ಎಲ್ಲವನ್ನೂ ಒಳಗೊಂಡ ಪರಿಸರವೇ ದೇವರು. ಅದು ನಮಗೆ ಬದುಕಲು ಎಲ್ಲಾ ಕೊಡುತ್ತದೆ. ಅದನ್ನು ಸಂರಕ್ಷಿಸಲು ನಾವೇನು ನೀಡುತ್ತಿದ್ದೇವೆ ಎಂದು ಪ್ರಶ್ನಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ಜ್ಯೋತಿ ಬೆಳಗಿಸಿ ಉದ್ಘಾ ಟಿಸಿದರು. ಪ್ರಿನ್ಸಿಪಾಲ್ ಪ್ರೊ. ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಭದ್ರಾವತಿ ತಾಲೂಕು ಕಸಾಪ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಹೊಳೆಹೊನ್ನೂರು ಹೋಬಳಿ ಕಸಾಪ ಅಧ್ಯಕ್ಷ ಸಿದ್ದಪ್ಪ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ದೇವಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ರುದ್ರಮುನಿ ನಿರ...